Monday, July 5, 2021

ಪಾದುವ ಊರಲ್ಲಿ ಉದಯಿಸಿದ ತಾರೆ

ಪಾದುವ ಊರಲ್ಲಿ ಉದಯಿಸಿದ ತಾರೆ
ಪಾವಿತ್ರ್ಯತೆಯ ಪ್ರತೀಕ ಧೃವತಾರೆ
ಪ್ರೀತಿ ಭಕ್ತಿಯ ಪರಿಶುದ್ಧ ತಾರೆ
ಕ್ರಿಸ್ತ ಪ್ರೇಮವ ಬೆಳಗಿದ ತಾರೆ
ಸಂತ ಅಂತೋಣಿಯವರೇ ।। ಧರ್ಮಸಭೆಯ ಆಧಾರವೇ

1. ಪ್ರೇಷಿತ ಮನದಿಂದ । ಜಪ ಧ್ಯಾನದಿಂದ
 ಬಾಳಿದ ಅಂತೋಣಿಯವರೇ
ಭಕ್ತರ ಹೃನಮನದಿ । ಶುಭ ವಾರ್ತೆ ಬಿತ್ತಿ
ಬೆಳೆದ ಅಂತೋಣಿಯವರೇ
ಪರಿಶುದ್ಧ ಲಿಲ್ಲಿ ಹೂವಂತ ಮನದಿ
ಅರಳಿದ ಅಂತೋಣಿಯವರೇ
ನಮ್ಮ ಪರಿಪಾಲಕರೇ 

2. ಭಯಭೀತಿ ಇರದ ವಿನಯವೇ ಮೈತಳೆದ  
ವಿಧೇಯ ಪ್ರಜ್ವಲ ತಾರೆ 
ಏಕಾಂತದಲ್ಲೂ ಅಜ್ಞಾತದಲ್ಲೂ 
ಕಠಿಣ ಪ್ರಾರ್ಥನಧಾರೆ  
ಅದ್ಭುತಗಳ ಚಿಲುಮೆ ಗೌರವಗಳ ಹಿರಿಮೆ 
ಒಲುಮೆಯ ಅಂತೋಣಿಯವರೇ 
ನಮ್ಮ ಪರಿಪಾಲಕರೇ

ಸಂಗೀತ - ಸಂಪತ್ 
ಸಾಹಿತ್ಯ - ಪ್ರಶಾಂತ್ ಇಗ್ನೇಷಿಯಸ್ 

Songs

ಶರಣಂ ಶರಣಂ ಗುರುದೇವಾ

| ಶರಣಂ ಶರಣಂ ಶರಣಂ ಶರಣಂ || ಶರಣಂ ಶರಣಂ ಗುರುದೇವಾ ನಿನ್ನ ಸನ್ನಿಧಿ ಸೇರಿರುವೆ ಶರಣಂ ಶರಣಂ ಎಂದೆನ್ನುತ್ತಾ ನಾ ಶಿರವನು ಬಾಗಿರುವೆ ನೀನಿಲ್ಲದೆ ನಾ ನಿಲ್...