ಬೆಳಕು ಕತ್ತಲಲ್ಲಿ ಕಂಡಿದೆ
ಬೆಳಕು ಕಣ್ಣ ಮುಂದೆ ನಿಂತಿದೆ
ಬೆಳಕು ಬಾನಿನಲ್ಲಿ ಮೂಡಿದೆ
ಬೆಳಕು ಗೋಚರಿಸಿದೆ
ಧಿಂ ಧಿಂ ತನನನ ಧಿಂ ಧಿಂ
ಬೆಳಕು ಬೆಳಕು ಶೋಷಿತ ಜನರ
ಮನೆಗಳ ಬಾಗಿಲಲ್ಲಿಂದು
ಬೆಳಕು ಬೆಳಕು ಜರಿತದಿ ನಲುಗಿಹ
ನೋವಿನ ಕಂಗಳಲಿಂದು
ಉದಯಿಸಿತ್ತೊಂದು ನಕ್ಷತ್ರ
ದೀನರಿಗೆಲ್ಲ ಅದು ಮಿತ್ರ
ಭರವಸೆ ತುಂಬಿಹ ಸುಪ್ರೀತ
ಮಾನವ ಕೋಟಿಗೆ ಅರ್ಪಿತ
ಜಗದ್ಧೋದಾರಕ ಆತ್ಮೋದ್ಧಾರಕ
ಪ್ರಾಣೋದ್ಧಾರಕ ನೀನೆ
ಜೀವೋದ್ಧಾರಕ ಸರ್ವೋದ್ಧಾರಕ
ನೀನೇ ವರಸುತನು
ಆ ..........
ಬಾನಾಗೆಲ್ಲಾ ಬೆಳ್ ಕು ಚೆಲ್‌ದಂಗೈತೆ
ಕತ್ಲಾಗೆಲ್ಲಾ ಕಾಂತಿ ತುಂಬ್‌ದಂಗೈತೆ
ದೇವಸುತನಾದರು
ಕೊಟ್ಟಿಗೆಯಲ್ ಜನಿಸಿದೆ
ದುಷ್ಟ ಜನ ಮಧ್ಯೆಯೆ
ದಿವ್ಯ ಶಿಶುವಾಗಿಹೆ
ಕಷ್ಟದ ಕೋಟಲೆ
ನಿತ್ಯದ ವೇದನೆ ಅಳಿಯಿತು
ದುಷ್ಟರ ಎದುರಿಪ
ಕ್ರಾಂತಿಯ ಯೋಜನೆ ಹೊಳೆಯಿತು
ಸಿದ್ಧವಾಗಿವೆ ಕರಗಳು
ಬದ್ಧವಾಗಿವೆ ಮನಗಳು
ಒಟ್ಟು ಗೂಡ್ವೆವು ಎಲ್ಲರೂ
ನಿನ್ನನ್ನು ಕಾಣಲು
ಪ್ರೀತಿ ಶಾಂತಿಯ ಸವಿಯಲು
ಧೈರ್ಯ ಸಾಹಸ ಪಡೆಯಲು
ಕಟುಕರನ್ನು ಕೊನೆಗೊಳಿಸಲು
ನಿನ್ನನ್ನು ಸೇರಲು
ಸಾಹಿತ್ಯ - ಸಂಗೀತ
ಜೋಸೆಫ್ ರಾಯಪ್ಪ
No comments:
Post a Comment