Saturday, July 3, 2021

ಬೆಳಕು ಕತ್ತಲಲ್ಲಿ ಕಂಡಿದೆ


ಬೆಳಕು ಕತ್ತಲಲ್ಲಿ ಕಂಡಿದೆ
ಬೆಳಕು ಕಣ್ಣ ಮುಂದೆ ನಿಂತಿದೆ
ಬೆಳಕು ಬಾನಿನಲ್ಲಿ ಮೂಡಿದೆ
ಬೆಳಕು ಗೋಚರಿಸಿದೆ
ಧಿಂ ಧಿಂ ತನನನ ಧಿಂ ಧಿಂ

ಬೆಳಕು ಬೆಳಕು ಶೋಷಿತ ಜನರ 
ಮನೆಗಳ ಬಾಗಿಲಲ್ಲಿಂದು
ಬೆಳಕು ಬೆಳಕು ಜರಿತದಿ ನಲುಗಿಹ 
ನೋವಿನ ಕಂಗಳಲಿಂದು

ಉದಯಿಸಿತ್ತೊಂದು ನಕ್ಷತ್ರ 
ದೀನರಿಗೆಲ್ಲ ಅದು ಮಿತ್ರ
ಭರವಸೆ ತುಂಬಿಹ ಸುಪ್ರೀತ
ಮಾನವ ಕೋಟಿಗೆ ಅರ್ಪಿತ

ಜಗದ್ಧೋದಾರಕ ಆತ್ಮೋದ್ಧಾರಕ 
ಪ್ರಾಣೋದ್ಧಾರಕ ನೀನೆ
ಜೀವೋದ್ಧಾರಕ ಸರ್ವೋದ್ಧಾರಕ 
ನೀನೇ ವರಸುತನು
ಆ ..........

ಬಾನಾಗೆಲ್ಲಾ ಬೆಳ್ ಕು ಚೆಲ್‌ದಂಗೈತೆ
ಕತ್ಲಾಗೆಲ್ಲಾ ಕಾಂತಿ ತುಂಬ್‌ದಂಗೈತೆ
ದೇವಸುತನಾದರು 
ಕೊಟ್ಟಿಗೆಯಲ್ ಜನಿಸಿದೆ
ದುಷ್ಟ ಜನ ಮಧ್ಯೆಯೆ 
ದಿವ್ಯ ಶಿಶುವಾಗಿಹೆ
ಕಷ್ಟದ ಕೋಟಲೆ 
ನಿತ್ಯದ ವೇದನೆ ಅಳಿಯಿತು
ದುಷ್ಟರ ಎದುರಿಪ 
ಕ್ರಾಂತಿಯ ಯೋಜನೆ ಹೊಳೆಯಿತು

ಸಿದ್ಧವಾಗಿವೆ ಕರಗಳು 
ಬದ್ಧವಾಗಿವೆ ಮನಗಳು
ಒಟ್ಟು ಗೂಡ್ವೆವು ಎಲ್ಲರೂ 
ನಿನ್ನನ್ನು ಕಾಣಲು
ಪ್ರೀತಿ ಶಾಂತಿಯ ಸವಿಯಲು
ಧೈರ್ಯ ಸಾಹಸ ಪಡೆಯಲು
ಕಟುಕರನ್ನು ಕೊನೆಗೊಳಿಸಲು 
ನಿನ್ನನ್ನು ಸೇರಲು

ಸಾಹಿತ್ಯ - ಸಂಗೀತ 
ಜೋಸೆಫ್ ರಾಯಪ್ಪ 

Songs

ಶರಣಂ ಶರಣಂ ಗುರುದೇವಾ

| ಶರಣಂ ಶರಣಂ ಶರಣಂ ಶರಣಂ || ಶರಣಂ ಶರಣಂ ಗುರುದೇವಾ ನಿನ್ನ ಸನ್ನಿಧಿ ಸೇರಿರುವೆ ಶರಣಂ ಶರಣಂ ಎಂದೆನ್ನುತ್ತಾ ನಾ ಶಿರವನು ಬಾಗಿರುವೆ ನೀನಿಲ್ಲದೆ ನಾ ನಿಲ್...