|ಶರಣಂ ಶರಣಂ ಶರಣಂ ಶರಣಂ||
ಶರಣಂ ಶರಣಂ ಗುರುದೇವಾ
ನಿನ್ನ ಸನ್ನಿಧಿ ಸೇರಿರುವೆ
ಶರಣಂ ಶರಣಂ ಎಂದೆನ್ನುತ್ತಾ
ನಾ ಶಿರವನು ಬಾಗಿರುವೆ
ನೀನಿಲ್ಲದೆ ನಾ ನಿಲ್ಲವೇ, ಅಲ್ಲವೇ..
ನಿನ್ನಿಂದಲೇ ನಾನಲ್ಲವೇ
ನಿನ್ನಯ ಒಲುಮೆಯೇ
ನಿನ್ನಯ ಆಶ್ರಯವೇ, ದೇವಾ.....
||ಸ ನಿ ಸನಿ ಸನಿ| ಪ ನಿ ಸ| ಸ ನಿ ಸನಿ ಸನಿ| ಸ ಗ ಸ||
||ಪ ಪಪಪಪ ನಿ ನಿನಿನಿನಿ| ಸ ಸಸ ಪನಿಸ||
||ಸ ಸಸಸಸ ಗ ಗಗಗಗ| ಮ ಮಮಮಮಪ...||
ಆಕಾಶವು ಭೂಮಿಯೆಲ್ಲವೂ ನನ್ನ ದೇವನ ಕೈ ಕೃತಿಗಳು,
ಅದರೊಳಗಿನ ಕಣ ನಾನು
ಒಂದು ಸಣ್ಣ ಕಣವಾದರೂ, ಎಂದಿಗೂ ನನ್ನನ್ನು ಕಾಯುವನು
ಒಂದು ಸಣ್ಣ ಕಣವಾದರೂ, ಮಣ್ಣಿನಿಂದಲೇ ರೂಪವನು ನೀಡಿಹನು
ಕಣದಿಂದ ಮಣ್ಣಿಂದ ದಯೆಯಿಂದ
ಎಲ್ಲಿ ಹೋಗಲಿ ಯಾರ ಬೇಡಲಿ
ನಿನ್ನ ಪಾದವೇ ಎನಗೆ ಆಸರೆ, ನಿನ್ನ ಕಾಣುವ ಹಂಬಲವೇ
ಆದಿ ಅಂತ್ಯ ನೀನು, ನಿನ್ನ ದಾಸನು ನಾನು
ಆದಿ ಅಂತ್ಯ ನೀನು, ಮಂದಿರದೊಳಗೆ ಆರಿಸಿ ಬಂದಿಹೆ ನಾನು
ನನ್ನ ಈ ಜೀವವ ತಂದಿಹೆನು
No comments:
Post a Comment